ಆರ್ಯಾವರ್ತ 2
	
ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ನೇಪಾಳಗಳಲ್ಲಿ ಪ್ರಸಾರ ಹೊಂದಿರುವ ಜನಪ್ರಿಯ, ಪ್ರಗತಿಪರ ದಿನಪತ್ರಿಕೆ. 1940ರಿಂದ ಪಾಟ್ನದ ಇಂಡಿಯನ್ ನೇಷನ್ ಪತ್ರಿಕಾ ಗುಂಪಿನ ಅಂಗವಾಗಿ ಹಿಂದೀ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ನಗರವಾಸಿಗಳ ಮತ್ತು ಹಳ್ಳಿಗರ ಅಭಿರುಚಿಗೆ ತಕ್ಕಂತೆ ಸುದ್ದಿಯನ್ನು ಸಾರುತ್ತ ಹಿಂದೀ ಪತ್ರಿಕೆಗಳ ಗುಂಪಿನ ಪ್ರಭಾವೀ ಪತ್ರಿಕೆಗಳಲ್ಲೊಂದೆನಿಸಿದೆ.													 
   
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ